Saturday, June 2, 2018

ಪ್ರಾತಃಸ್ಮರಣ ಸ್ತೋತ್ರ




ಪ್ರಾತಃಸ್ಮರಣ ಸ್ತೋತ್ರ

ಶ್ಲೋಕ - 1 - ಸಂಸ್ಕೃತದಲ್ಲಿ :

ಪ್ರಾತಃ ಸ್ಮರಾಮಿ ಹೃದಿ ಸಂಸ್ಫುರದಾತ್ಮತತ್ತ್ವಂ
ಸಚ್ಚಿತ್ಸುಖಂ ಪರಮಹಂಸಗತಿಂ ತುರೀಯಮ್
ಯತ್ ಸ್ವಪ್ನಜಾಗರಸುಷುಪ್ತಮವೈತಿ ನಿತ್ಯಂ
ತದ್ಬ್ರಹ್ಮ ನಿಷ್ಕಲಮಹಂ ನ ಚ ಭೂತಸಂಘಃ    
ಕನ್ನಡದಲ್ಲಿ :

ಬೆಳಗಿನೊಳು ನೆನೆವೆ ಎನ್ನೊಳಗಿನಾತ್ಮ ತತ್ವವನು
ಸಚ್ಚಿತ್ಸುಖವ ಪರಮಯೋಗಿಗಳ ಗುರಿ ತುರೀಯವನು
ಕನಸು ಎಚ್ಚರ ನಿದ್ದೆಗಳಿಗೂ ಮಿಗಿಲಾದುದನ್ನು
ಅದೆ ಬ್ರಹ್ಮವಮಲ ನಾನಹೆನು ಬರಿದೇಹವಲ್ಲ

ವಿವರಣೆ - :

ಮುಂಜಾನೆಯಲ್ಲಿ, ನನ್ನ ಮನದಾಂತರಾಳದಲ್ಲಿ ಹುದುಗಿರುವ ಆತ್ಮ ತತ್ವದ ಬಗೆಗೆ ಯೋಚಿಸುವೆ. ಆತ್ಮದೆಡೆಗಿನ ಆ ನೈಜ ಮಹಾನ್ ಸತ್ಯವು ಅರಿತುಕೊಂಡ ಪರಮಯೋಗಿಗಳ ಗುರಿಯಾದ ತುರೀಯಾವಸ್ಥೆಯು ನಿದ್ರೆ ಕನಸು ಅಥವಾ ಎಚ್ಚರಗಳಿಗೂ ಮಿಗಿಲಾದದ್ದು ಸತ್ಯವನ್ನು ತಿಳಿಸುವುದು ನಾನು ಪಂಚಭೂತಗಳಾದ ಅಗ್ನಿ ವಾಯು ಜಲ ಆಕಾಶ ಮತ್ತು ಭೂಮಿಯಲ್ಲ ಬದಲಾಗಿ ನಾನು ನಿಷ್ಕಳಂಕ ಬ್ರಹ್ಮನ್.

ಶ್ಲೋಕ - 2 - ಸಂಸ್ಕೃತದಲ್ಲಿ :

ಪ್ರಾತರ್ಭಜಾಮಿ ಮನಸಾಂ ವಚಸಾಮಗಮ್ಯo
ವಾಚೋ ವಿಭಾಂತಿ ನಿಖಿಲಾ ಯದನುಗ್ರಹೇಣ
ಯಂ ನೇತಿ ನೇತಿ ವಚನೈರ್ನಿಗಮಾ ಅವೋಚುಃ
ತಂ ದೇವದೇವಮಜಮಚ್ಯುತಮಾಹುರಗ್ರ್ಯಮ್
ಕನ್ನಡದಲ್ಲಿ :

ಬೆಳಗಾಗೆ ಭಜಿಸುವೆನು ನಾ ಮಾತಿಗತೀತನನು
ನುಡಿಗಳು ಬೆಳಗುವುದಾರ ಕಟಾಕ್ಷದಿಂದ
`ಇದಲ್ಲವಿದಲ್ಲ´ವೆಂದವು ನಿಗಮಂಗಳವನ
ಅವನಚ್ಯುತನಜನು ದೇವನವನೆ ಮೊದಲಿಗನು

ವಿವರಣೆ  :


ಮಾತು, ಮನಸ್ಸು, ಕಣ್ಣುಗಳಿಗೆ ನಿಲುಕದ ಹಾಗೂ ಅದರ ಅನುಗ್ರಹವು ಎಲ್ಲ ಮಾತುಗಳನ್ನೂ ಬೆಳಗಿಸುವ ಹಾಗೂ "ಇದು ಅದಲ್ಲ, ಇದು ಅದಲ್ಲ " ಎಂಬ ಪದಗಳ ಮೂಲಕ ಅನ್ವೇಷಿಸಲ್ಪಡುವ ಮತ್ತು ಅದು ಅವಿಭಾಜ್ಯ ಕಾರಣ ಮತ್ತು ದೇವ ದೇವನಾದ ಅಚ್ಯುತನೆಡೆಗೆ ಕರೆದೊಯ್ಯುವ ಪರಮ ಸತ್ಯಕ್ಕೆ ನನ್ನ ನಮನಗಳು.

ಶ್ಲೋಕ - 3 - ಸಂಸ್ಕೃತದಲ್ಲಿ :

ಪ್ರಾತರ್ನಮಾಮಿ ತಮಸಃ ಪರಮರ್ಕವರ್ಣo
ಪೂರ್ಣಂ ಸನಾತನಪದಂ ಪುರುಷೋತ್ತಮಾಖ್ಯಮ್
ಯಸ್ಮಿನ್ನಿದಂ ಜಗದಶೇಷಮಶೇಷಮೂರ್ತೌ
ರಜ್ಜ್ವಾಂ ಭುಜಂಗಮ ಇವ ಪ್ರತಿಭಾಸಿತಂ ವೈ
ಕನ್ನಡದಲ್ಲಿ :

ಬೆಳಗಾಗೆ ನಮಿಸುವೆ ಕತ್ತಲೆಯಮೀರಿದರ್ಕವರ್ಣವನು
ಸ್ಥಿರವು ಪೂರ್ಣವು ಪುರುಷೋತ್ತಮನೆಂಬರದನು
ಅದರಿಂದಲೀ ಜಗವು ಕಾಣ್ಬುದು ಮೂರ್ತಿಗೊಂಡು
ಹುರಿಯಹಾವಿನ ತೆರದಿ ಭ್ರಮೆಯ ತೋರುವುದು

ವಿವರಣೆ :

ಯಾವುದು ಸೂರ್ಯನಂತೆ ಹೊಳೆಯುವ, ಅಂಧಕಾರದಿಂದಾಚೆಗಿನ, ಪೂರ್ಣವಾದ, ಶಾಶ್ವತ ಸ್ಥಾನವುಳ್ಳ, ಭಗವಂತನ ಆಜ್ಞಾನುವರ್ತಿಯಾದ, ಪ್ರಪಂಚದ ಹಾಗೂ ಎಲ್ಲ ಜೀವಿಗಳ ಮೂಲವಾದ, ಮತ್ತು ಪ್ರತಿಫಲನದ ನಂತರ ಹಗ್ಗ ಮತ್ತು ಹಾವುಗಳ ನಡುವಿನ ವ್ಯತ್ಯಾಸವನ್ನು ಕಂಡುಕೊಳ್ಳುವ, ಪರಮೋಚ್ಚ ಜ್ಞಾನಕ್ಕೆ ನಾನು ನಮಸ್ಕರಿಸುವೆ.

ಲೇಖನದ ಮೂಲ :
ಸಂಸ್ಕೃತ ಶ್ಲೋಕಗಳು: stotraratna,sathyasaibababrotherhood.org
ಕನ್ನಡ ಶ್ಲೋಕಗಳು : ಶ್ರೀ.ಬಿ.ಎಸ್.ಚಂದ್ರಶೇಖರ ಅವರ “ಸವಿಗನ್ನಡ ಸ್ತೋತ್ರಚಂದ್ರಿಕೆ”
ವಿವರಣೆಗಳು : stotraratna,sathyasaibababrotherhood.org – ಆಂಗ್ಲ ಭಾಷೆಯಲ್ಲಿನ ವಿವರಗಳ ಭಾವಾರ್ಥವನ್ನು ಕನ್ನಡದಲ್ಲಿ ಪ್ರಸ್ತುತಿ ಪಡಿಸಿದವರು – ಗುರುಪ್ರಸಾದ್ ಹಾಲ್ಕುರಿಕೆ.






No comments:

Post a Comment

ಶಿವಾಪರಾಧ ಕ್ಷಮಾಪಣ ಸ್ತೋತ್ರ

ಶಿವಾಪರಾಧ ಕ್ಷಮಾಪಣ ಸ್ತೋತ್ರ ಪ್ರಸ್ತಾವನೆ : ಅಪರಾಧ ಸ್ತೋತ್ರವೆಂದರೇನು? ಇದು ಅಪರಾಧಿಯ ಪ್ರಾಯಶ್ಚಿತ್ತ ಹಾಗೂ ಕ್ಷಮೆಯನ್ನು ಕೋರುವ ಸ್ತೋತ್ರ. ಶಿವಾಪರಾಧ ಕ್ಷಮ...