ನಾರಾಯಣ ಸ್ತೋತ್ರ
|
ಪ್ರಸ್ತಾವನೆ:
ಆದಿ ಶಂಕರಾಚಾರ್ಯರು ರಚಿಸಿರುವ ನಾರಾಯಣ ಸ್ತುತಿಗಳಲ್ಲಿ
ಈ ಸ್ತೋತ್ರವು ಅತ್ಯಂತ ಮಧುರ ಹಾಗೂ ಸುಲಲಿತವಾದದ್ದು. ಈ ಸ್ತೋತ್ರವನ್ನು ಮೊದಲು ಅದರ
ಅಮ್ತರಾರ್ಥವನ್ನು ಅರಿತು ಪ್ರತಿದಿನವೂ
ಮುಂಜಾನೆ ಪಠಿಸಿದಲ್ಲಿ ಮನಸ್ಸಿಗೆ ಶಾಂತಿ, ಉಂಟಾಗಿ ಎಲ್ಲ ದುಷ್ಟ ಶಕ್ತಿಗಳು ದುಉರಾಗುವುದು
ಹಾಗೂ ಆರೋಗ್ಯ ಮತ್ತು ಅಭ್ಯುದಯವು ದೊರಕುವುದು.
|
ಶ್ಲೋಕ - 1 - ಸಂಸ್ಕೃತದಲ್ಲಿ
:
ನಾರಾಯಣ ನಾರಾಯಣ ಜಯ ಗೋವಿಂದ ಹರೇ
ನಾರಾಯಣ ನಾರಾಯಣ ಜಯ ಗೋಪಾಲ ಹರೇ
|
ಕನ್ನಡದಲ್ಲಿ :
ನಾರಾಯಣ ನಾರಾಯಣ ಜಯ ಗೋವಿಂದ ಹರಿ
ನಾರಾಯಣ ನಾರಾಯಣ ಜಯ ಗೋಪಾಲ ಹರಿ
|
ವಿವರಣೆ :
ಎಲ್ಲರನ್ನೂ ರಕ್ಷಿಸುವ ಹೇ ದೇವಾ ! ಗೋವಿಂದ ! ನಾರಾಯಣ ! ಜಯವಾಗಲಿ
ಹೇ ಗೋಪಾಲ ! ಎಲ್ಲರನ್ನೂ ರಕ್ಷಿಸುವವ, ನಾರಾಯಣ ! ಜಯವಾಗಲಿ
|
ಶ್ಲೋಕ - 2 - ಸಂಸ್ಕೃತದಲ್ಲಿ
:
ಕರುಣಾಪಾರಾವಾರ ವರುಣಾಲಯಗಂಭೀರ ನಾರಾಯಣ
ಘನನೀರದಸಂಕಾಶ ಕೃತಕಲಿಕಲ್ಮಷನಾಶನ ನಾರಾಯಣ
|
ಕನ್ನಡದಲ್ಲಿ :
ಕರುಣೆಯ ಕಡಲು ಸಾಗರದೊಲು ಗಂಭೀರ ನಾರಾಯಣ
ಘನನೀರದ ಶ್ಯಾಮನೆ ಕಲಿಕಲುಷ ವಿನಾಶನ ನಾರಾಯಣ
|
ವಿವರಣೆ :
ಹೇ ದಯಾಸಾಗರನೇ ಎಲ್ಲ ದೇವರುಗಳಲ್ಲಿ ಸಾಗರದಂತೆ ಭವ್ಯವಾದ
ನಾರಾಯಣನೇ ! ದಟ್ಟವಾದ ಮೋಡಗಳಂತೆ ಕಂಗೊಳಿಸುವ ಹೇ ದೇವನೆ ! ಕಲಿಯುಗದ ಹಾನಿಕಾರಕ ಹಾಗೂ ನೀಚತನವನ್ನು ನಾಶಮಾಡುವ ಹೇ ದೇವನೆ !
|
ಶ್ಲೋಕ - 3 - ಸಂಸ್ಕೃತದಲ್ಲಿ
:
ಯಮುನಾತೀರವಿಹಾರ ಧೃತಕೌಸ್ತುಭಮಣಿಹಾರ ನಾರಾಯಣ
ಪೀತಾಂಬರಪರಿಧಾನ ಸುರಕಲ್ಯಾಣನಿಧಾನ ನಾರಾಯಣ
|
ಕನ್ನಡದಲ್ಲಿ :
ಯಮುನಾತೀರ ವಿಹಾರಿ ಕೌಸ್ತುಭಮಣಿಶೋಭಿತ ನಾರಾಯಣ
ಪೀತಾಂಬರಧಾರಿ ಸುರಕಲ್ಯಾಣನಿಧಿಯೆ ನಾರಾಯಣ
|
ವಿವರಣೆ :
ಯಮುನಾ ನದಿಯ ದಡದಲ್ಲಿ ಗೋಪಾಲಕರೊಂದಿಗೆ ಆಟ ಪಾಟಗಳೊಂದಿಗೆ
ನಲಿದಾಡಿದ ಹಾಗೂ ಸಾಗರ ಮಥನದಲ್ಲಿ ಉದ್ಭವಿಸಿದ ಹದಿನಾಲ್ಕು ರತ್ನಗಳಲ್ಲಿ ನಾಲ್ಕನೇ ರತ್ನವಾದ ಕೌಸ್ತುಭಮಣಿಯಿಂದ
ಕೂಡಿದ ಮಾಲೆಯನ್ನು ಧರಿಸಿರುವ ಓ ! ನಾರಾಯಣನೇ !
ದೈವತ್ವವನ್ನು ಪ್ರತಿನಿಧಿಸುವ ಹಳದಿ ಬಣ್ಣದ ರೇಷ್ಮೆ ವಸ್ತ್ರವನ್ನು
ಧರಿಸಿ ಎಲ್ಲ ದೇವಾನು ದೇವತೆಗಳಿಗೆ ಸದಾಚಾರಗಳ ಭಂಡಾರನಾದ ಓ ! ನಾರಾಯಣನೇ !
|
ಶ್ಲೋಕ - 4 - ಸಂಸ್ಕೃತದಲ್ಲಿ
:
ಮಂಜುಲಗುಂಜಾಭೂಷ ಮಾಯಾಮಾನುಷವೇಷ ನಾರಾಯಣ
ರಾಧಾಧರಮಧುರಸಿಕ ರಜನೀಕರಕುಲತಿಲಕ ನಾರಾಯಣ
|
ಕನ್ನಡದಲ್ಲಿ :
ಮಂಜುಳ ಗುಂಜೀಹಾರ ವಿಭೂಷಿತ ಮಾಯಾ ಮಾನುಷವೇಷ ನಾರಾಯಣ
ರಾಧೆಯಧರ ಮಧುರಾಮೃತರಸಿಕ ಯದುವರ ನಾರಾಯಣ
|
ವಿವರಣೆ :
ಮಹಾಲಕ್ಷ್ಮಿಯನ್ನು ಸಂಕೇತಿಸುವ ರಕ್ತವರ್ಣದ ಗುಂಜ ಮಣಿಗಳಿಂದ
ಕೂಡಿದ ಮುದ್ದಾದ ಹಾರವನ್ನು ಧರಿಸಿರುವ ಹಾಗೂ ಬೇಕೆಂದಾಗ ಅದೃಷ್ಯ ಮಾನವನ ರೂಪವನ್ನು ಧರಿಸುವ ಹೇ
ದೇವ ದೇವನೇ ! ಓ ! ನಾರಾಯಣ !
ಬೃಂದಾವನದಲ್ಲಿನ ರಾಧೆಯ ತುಟಿಗಳಿಂದ ಹೊರಸೂಸುವ ಜೇನನ್ನು
ಸವಿದು ಆನಂದಿಸಿದ ಹಾಗೂ ಚಂದ್ರವಂಶದ ರಾಜಕುವರನೇ ! ಓ ! ನಾರಾಯಣನೇ
!
|
ಶ್ಲೋಕ - 5 - ಸಂಸ್ಕೃತದಲ್ಲಿ
:
ಮುರಲೀಗಾನವಿನೋದ ವೇದಸ್ತುತಭೂಪಾದ ನಾರಾಯಣ
ಬರ್ಹಿನಿಬರ್ಹಾಪೀಡ ನಟನಾಟಕಫಣಿಕ್ರೀಡ ನಾರಾಯಣ
|
ಕನ್ನಡದಲ್ಲಿ :
ವೇಣುಗಾನ ವಿನೋದಿ ವೇದನುತಪಾದ ನಾರಾಯಣ
ನವಿಲಗರಿ ಧರಿಸಿದ ಘನಫಣಿಶಿರ ನರ್ತಕ ನಾರಾಯಣ
|
ವಿವರಣೆ :
ಕೊಳಲಿನಿಂದ ಸುಶ್ರಾವ್ಯವಾದ ಗಾಯನವನ್ನು ಹೊರಡಿಸಿ ಅದರಿಂದ
ಆನಂದತುಂದಿಲನಾದ ಹೇ ದೇವನೇ ! ನಿನ್ನ ಪವಿತ್ರ ಪಾದ ಪದ್ಮಗಳನ್ನು ವೇದಗಳೇ
ವೈಭವಯುತವಾಗಿ ಹೊಗಳಿ ಸ್ತುತಿಸಿರುವುದು ಓ ನಾರಾಯಣನೇ ! ವರ್ಣ ವೈವಿಧ್ಯಮಯ
ನೀಲಿ ಬಣ್ಣದ ಸುಂದರ ನವಿಲಿಗರಿಯನ್ನು ಧರಿಸಿರುವ ಹೇ ದೇವನೇ ! ವಿಷಪೂರಿತ
ಕಾಳಿಂಗ ಸರ್ಪದ ಹೆಡೆಯ ಮೇಲೇರಿ ನರ್ತಿಸಿದ ಹೇ ದೇವನೇ ! ನಾರಾಯಣನೇ
!
|
ಶ್ಲೋಕ - 6 - ಸಂಸ್ಕೃತದಲ್ಲಿ
:
ವಾರಿಜಭೂಷಾಭರಣ ರಾಜೀವರುಕ್ಮಿಣೀರಮಣ ನಾರಾಯಣ
ಜಲರುಹದಲನಿಭನೇತ್ರ ಜಗದಾರಂಭಕಸೂತ್ರ ನಾರಾಯಣ
|
ಕನ್ನಡದಲ್ಲಿ :
ಜಲಜಾಭರಣ ಭೂಷಿತ ಜಲಧಿಸುತೆಯ ರಮಣ ನಾರಾಯಣ
ಜಲರುಹದಳದೊಲು ನಯನ ಜಗದುಗಮ ಸೂತ್ರ ನಾರಾಯಣ
|
ವಿವರಣೆ :
ಕಮಲ ಪುಷ್ಪವನ್ನೆ ಆಭರಣವನ್ನಾಗಿ ಧರಿಸಿರುವ ಹಾಗೂ ಪದ್ಮ ಪುತ್ರಿ
ರುಕ್ಮಿಣಿಯ ರಮಣನೇ ಓ, ದೇವ
! ನಾರಾಯಣನೇ ! ಪದ್ಮಪುಷ್ಪದಂಥಹ ನೇತ್ರವುಳ್ಳವನೇ ವಿಶ್ವ
ಸೃಷ್ಟಿಗೇ ಕಾರಣನೇ ಓ ದೇವ ! ನಾರಾಯಣನೇ !
|
ಶ್ಲೋಕ - 7 - ಸಂಸ್ಕೃತದಲ್ಲಿ
:
ಪಾತಕರಜನೀಸಂಹರ ಕರುಣಾಲಯ ಮಾಮುದ್ಧರ ನಾರಾಯಣ
ಅಘ ಬಕಹಯಕಂಸಾರೇ ಕೇಶವ ಕೃಷ್ಣ ಮುರಾರೇ ನಾರಾಯಣ
|
ಕನ್ನಡದಲ್ಲಿ :
ಪಾತಕರಜ ಸಂಹಾರಕ ಕರುಣಾಲಯ ಉದ್ಧರಿಸೆನ್ನನು ನಾರಾಯಣ
ಅಘ ಬಕಹಯ ಕಂಸಾರಿಯೆ ಕೇಶವ ಕೃಷ್ಣಮುರಾರಿ ನಾರಾಯಣ
|
ವಿವರಣೆ :
ದುಷ್ಕರ್ಮಗಳ ಕತ್ತಲಿನ ಕೂಪವನ್ನು ನಾಶಮಾಡುವ ಓ ದೇವನೇ ! ನಿನ್ನ ಕರುಣೆಯಿಂದ ನನ್ನನ್ನು ಉದ್ಧರಿಸುವ ನಾರಾಯಣನೇ ! ನಿನ್ನ
ಸೋದರಮಾವನಾದ ಕಂಸನು ಕಳುಹಿಸಿದ ಅಘಾಸುರ ಹಾಗೂ ಭಗಾಸುರರನ್ನು ಸಂಹರಿಸಿದವನೇ
ಹಾಗೂ ಕಂಸನ ಪರಮ ವೈರಿಯೇ ಮುರಾಸುರನ ವೈರಿಯೇ ಓ ಕೇಶವಾ ಕೃಷ್ಣಾ ನಾರಾಯಣನೇ !
|
ಶ್ಲೋಕ - 8 - ಸಂಸ್ಕೃತದಲ್ಲಿ
:
ಹಾಟಕನಿಭಪೀತಾಂಬರ ಅಭಯಂ ಕುರು ಮೇ ಮಾವರ ನಾರಾಯಣ
ದಶರಥರಾಜಕುಮಾರ ದಾನವಮದಸಂಹಾರ ನಾರಾಯಣ
|
ಕನ್ನಡದಲ್ಲಿ :
ಮಿಸುನಿಯೊಲಿಹ ಪೀತಾಂಬರಧರ ಅಭಯ ಕೊಡೆನಗೆ ಮಾರಮಣ ನಾರಾಯಣ
ದಶರಥ ರಾಜಕುಮಾರ ರಕ್ಕಸಮದಸಂಹಾರ ನಾರಾಯಣ
|
ವಿವರಣೆ :
ಬಂಗಾರದಂತೆ ಝಗ ಝಗಿಸುವ ಹಳದಿ ಬಣ್ಣದ ಪೀತಾಂಬರವನ್ನು ಧರಿಸಿರುವ
ಓ ದೇವನೇ ! ಲಕ್ಷ್ಮೀರಮಣ ನಾರಾಯಣನೇ ಕೃಪೆದೋರಿ ನನ್ನನ್ನು ರಕ್ಷಿಸು.
ಓ ದೇವನೇ ದಶರಥ ರಾಜಕುಮಾರನೇ ಅಸುರರ ದರ್ಪವನ್ನು ನಾಶಮಾಡಿದವನೇ ಹೇ ನಾರಾಯಣನೇ
!
|
ಶ್ಲೋಕ - 9 - ಸಂಸ್ಕೃತದಲ್ಲಿ
:
ಗೋವರ್ಧನಗಿರಿ ರಮಣ ಗೋಪೀಮಾನಸಹರಣ ನಾರಾಯಣ
ಸರಯೂತೀರವಿಹಾರ ಸಜ್ಜನ ಋಷಿಮಂದಾರ ನಾರಾಯಣ
|
ಕನ್ನಡದಲ್ಲಿ :
ಗೋವರ್ಧನಗಿರಿ ಪ್ರಿಯಕರ ಗೋಪೀಮಾನಸ ಚೋರ ನಾರಾಯಣ
ಸರಯೂ ತೀರ ವಿಹಾರ ಸುಜನರ ಸುರತರು ನಾರಾಯಣ
|
ವಿವರಣೆ :
ಗೋವರ್ಧನ ಪರ್ವತವನ್ನು ಉದ್ಧರಿಸಿದ ಓ ದೇವನೇ ! ಗೋಪಿಕಾ ಸ್ತ್ರೀಯರ ಚಿತ್ತ ಚೋರನೇ ಹೇ ನಾರಾಯಣನೇ ! ಓ ದೇವನೇ! ಸರಯೂ ನದಿ ತೀರದಲ್ಲಿ ಆಡಿ ಬೆಳೆದವನೇ
ಸಜ್ಜನರ ಆಸೆಗಳನ್ನು ಪೂರೈಸುವ ವೃಕ್ಷದಂತಿರುವ ಓ ದೇವನೇ ನಾರಾಯಣನೇ !
|
ಶ್ಲೋಕ - 10 - ಸಂಸ್ಕೃತದಲ್ಲಿ :
ವಿಶ್ವಾಮಿತ್ರಮಖತ್ರ ವಿವಿಧಪರಾಸುಚರಿತ್ರ ನಾರಾಯಣ
ಧ್ವಜವಜ್ರಾoಕುಶಪಾದ ಧರಣೀಸುತಸಹಮೋದ ನಾರಾಯಣ
|
ಕನ್ನಡದಲ್ಲಿ :
ಯತಿವಿಶ್ವಾಮಿತ್ರ ಯಜ್ಞ ಸುರಕ್ಷಕ ವಿವಿಧ ಸುಚರಿತ್ರ ನಾರಾಯಣ
ಧ್ವಜ ವಜ್ರಾಂಕುಶಪಾದ ಧರಣಿಸುತೆಯೊಡನೆ ಮೋದ ನಾರಾಯಣ
|
ವಿವರಣೆ :
ವಿಶ್ವಾಮಿತ್ರರ ಯಾಗವನ್ನು ರಕ್ಷಿಸಿ ಪರಿಪೂರ್ಣಗೊಳಿಸಿದ ಅನೇಕ
ಉತ್ತಮ ಚರಿತ್ರೆಯುಳ್ಳ ನಾರಾಯಣನೇ ! ಪಾದಗಳಲ್ಲಿ ಧ್ವಜ ಹಾಗೂ ಧ್ವಜ
ಸ್ತಂಭದ ಚಿನ್ಹೆಯುಳ್ಳ ಹೇ ದೇವನೇ ! ಭೂದೇವಿಯ ಮಗಳಿಂದ ಆನಂದವನ್ನು ಪಡೆದ
ಹೇ ದೇವನೇ ನಾರಾಯಣನೇ!
|
ಶ್ಲೋಕ - 11- ಸಂಸ್ಕೃತದಲ್ಲಿ
:
ಜನಕಸುತಾಪ್ರತಿಪಾಲ ಜಯ ಜಯ ಸಂಸ್ಕೃತಿಲೀಲ ನಾರಾಯಣ
ದಶರಥವಾಗ್ಧೃತಿಭಾರ ದಂಡಕವನಸಂಚಾರ ನಾರಾಯಣ
|
ಕನ್ನಡದಲ್ಲಿ :
ಜನಕಸುತಾಲೋಲ ಜಯ ಜಯ ಸಂಸಾರಲೀಲ ನಾರಾಯಣ
ಜನಕವಚನಪಾಲಕ ವನದಂಡಕಸಂಚಾರಿ ನಾರಾಯಣ
|
ವಿವರಣೆ :
ಜನಕರಾಜನ ಪುತ್ರಿಗಾಗಿ ಕಾದುಕೊಂಡಿದ್ದ ಓ ದೇವನೇ ! ಜೀವನ ನಾಟಕದ ಆಟಗಳನ್ನು ನೋಡಿ ಆನಂದಿಸಿದ ದೇವನಿಗೆ ಜಯವಾಗಲಿ ಜಯವಾಗಲಿ ನಾರಾಯಣನೇ
! ದಶರಥ ರಾಜನ ಮಾತನ್ನು ಪಾಲಿಸಿದ ಓ ದೇವನೇ ! ದಟ್ಟವಾದ
ದಂಡಕವನವನ್ನೆಲ್ಲ ಬರೀ ಕಾಲ್ನಡಿಗೆಯಲ್ಲಿ ಸಂಚರಿಸಿದ ಓ ದೇವನೇ ನಾರಾಯಣನೇ !
|
ಶ್ಲೋಕ - 12 - ಸಂಸ್ಕೃತದಲ್ಲಿ
:
ಮುಷ್ಟಿಕಚಾಣೂರಸಂಹಾರ ಮುನಿಮಾನಸವಿಹಾರ ನಾರಾಯಣ
ವಾಲಿವಿನಿಗ್ರಹಶೌರ್ಯ ವರಸುಗ್ರೀವಹಿತಾರ್ಯ ನಾರಾಯಣ
|
ಕನ್ನಡದಲ್ಲಿ :
ಮುಷ್ಟಿಕಚಾಣೂರರ ಮಣಿಸಿದ ಮುನಿಮನ ವಾಸಿ ನಾರಾಯಣ
ದುಷ್ಟ ವಾಲಿಯ ನಿಗ್ರಹಿಸಿ ವರ ಸುಗ್ರೀವಗನುಗ್ರಹಿಸಿದ ನಾರಾಯಣ
|
ವಿವರಣೆ :
ಕಂಸನ ಆಸ್ಥಾನದಲ್ಲಿ ಮುಷ್ಟಿಯುದ್ಧದಲ್ಲಿ ದುಷ್ಟ ಮುಷ್ಟಿಕ
ಹಾಗೂ ಚಾಣೂರರನ್ನು ಸಂಹಾರ ಮಾಡಿದ ಓ ದೇವನೇ ! ಋಷಿ ಮುನಿಗಳ ಮನಸ್ಸಿನಲ್ಲಿ ನೆಲೆಸಿರುವ
ಓ ದೇವನೇ ! ನಾರಾಯಣನೇ ! ಪರಾಕ್ರಮಿ ವಾಲಿಯನ್ನು
ಸಂಹಾರ ಮಾಡಿ ಸುಗ್ರೀವನಿಗೆ ಸಹಾಯ ಮಾಡಿದ ಓ ದೇವನೇ !
ನಾರಾಯಣನೇ !
|
ಶ್ಲೋಕ - 13 - ಸಂಸ್ಕೃತದಲ್ಲಿ
:
ಮಾಂ ಮುರಲೀಕರ ಧೀವರಪಾಲಯ ಪಾಲಯ ಶ್ರೀಧರ ನಾರಾಯಣ
ಜಲನಿಧಿ ಬಂಧನ ಧೀರ ರಾವಣಕಂಠವಿದಾರ ನಾರಾಯಣ
|
ಕನ್ನಡದಲ್ಲಿ :
ಕೊಳಲನು ಮಾಡೆನ್ನನು ಪಾಲಿಸು ಪಾಲಿಸು ಶ್ರೀಧರ ನಾರಾಯಣ
ಜಲಧಿನಿಬಂಧನ ಧೀರನೆ ದಶಶಿರಕಂಠವ ಸೀಳಿದ ನಾರಾಯಣ
|
ವಿವರಣೆ :
ಕೊಳಲನ್ನು ಕೈಯಲ್ಲಿ ಹಿಡಿದಿರುವ ಓ ಶೌರಿಯೇ ಲಕ್ಷ್ಮೀರಮಣನೇ
ಸಹಾಯ ಮಾಡು ಸಹಾಯ ಮಾಡು ನಾರಾಯಣನೇ. ಸಾಗರದ ಮೇಲೆ ಸೇತುವೆ ನಿರ್ಮಿಸಿದ ಓ ದೇವನೇ
! ರಾವಣನ ದಶ ಶಿರಗಳನ್ನು ತರಿದ ನಾರಾಯಣನೇ !
|
ಶ್ಲೋಕ - 14 - ಸಂಸ್ಕೃತದಲ್ಲಿ
:
ತಾಟಕಮರ್ದನ ರಾಮ ನಟಗುಣವಿವಿಧ ಸುರಾಮ ನಾರಾಯಣ
ಗೌತಮಪತ್ನೀಪೂಜನ ಕರುಣಾಘನಾವಲೋಕನ ನಾರಾಯಣ
|
ಕನ್ನಡದಲ್ಲಿ :
ತಾಟಕಿಮರ್ದನ ರಾಮ ಸುರನಾಟ್ಯಗಾನಾರಾಮ ನಾರಾಯಣ
ಗೌತಮಸತಿ ಪೂಜಿತ ಕರುಣಾರಸ ಸೇಚನ ನಾರಾಯಣ
|
ವಿವರಣೆ :
ತಾಟಕಿಯ ಅಹಂಕಾರವನ್ನು ಸಂಹರಿಸಿದ ಓ ದೇವನೇ ! ದೇವಾನು ದೇವತೆಗಳು ಗಾನ ನಾಟ್ಯಗಳಿಂದ ವರ್ಣಿಸಲ್ಪಡುವ ಓ ದೇವನೇ ನಾರಾಯಣನೇ !
ಗೌತಮ ಪತ್ನಿ ಅಹಲ್ಯೆಯಿಂದ ಪೂಜಿಸಲ್ಪಟ್ಟ ಹೇ ದೇವನೇ ಕರುಣಾಪೂರಿತ ದೃಷ್ಟಿಯುಳ್ಳವನೇ
ನಾರಾಯಣನೇ !
|
ಶ್ಲೋಕ - 15 - ಸಂಸ್ಕೃತದಲ್ಲಿ
ಸಂಭ್ರಮಸೀತಾಹಾರ ಸಾತಕೇತಪುರವಿಹಾರ ನಾರಾಯಣ
ಅಚಲೋಧೃತಚಂಚತ್ಕರ ಭಕ್ತಾನುಗ್ರಹತತ್ಪರ ನಾರಾಯಣ
|
ಕನ್ನಡದಲ್ಲಿ :
ಜಾನಕೀಮನ ಚೋರ ಸಾಕೇತಪುರ ವಿಹಾರ ನಾರಾಯಣ
ಗೋವರ್ಧನಗಿರಿಧರ ಧೀರ ಭಕ್ತಾನುಗ್ರಹತತ್ಪರ ನಾರಾಯಣ
|
ವಿವರಣೆ :
ಜನಕರಾಜನ ಪ್ರೀತಿಯ ಪುತ್ರಿಯ ಮನವನ್ನು ಕದ್ದ ಓ ದೇವನೇ ! ಅಯೋಧ್ಯಾ ನಿವಾಸಿಯೇ ನಾರಾಯಣನೇ, ಪರ್ವತವನ್ನೇ ಮೇಲೆತ್ತಲು ಶಕ್ಯನಾದ
ಓ ದೇವನೇ ! ಸದಾ ಭಕ್ತರನ್ನು ಆಶೀರ್ವದಿಸಲು ಉತ್ಸುಕನಾಗಿರುವ ಓ ದೇವನೇ
! ನಾರಾಯಣನೇ !
|
ಶ್ಲೋಕ - 16 - ಸಂಸ್ಕೃತದಲ್ಲಿ
:
ನೈಗಮಗಾನವಿನೋದ ರಕ್ಷಿತ ಸುಪ್ರಹ್ಲಾದ ನಾರಾಯಣ
ಭಾರತ ಯತಿವರಶಂಕರ ನಾಮಾಮೃತಮಖಿಲಾಂತರ ನಾರಾಯಣ
|
ಕನ್ನಡದಲ್ಲಿ :
ಸಾಮಗಾನವಿನೋದ ರಾಕ್ಷಸಸುತ ಪ್ರಹ್ಲಾದವರದ ನಾರಾಯಣ
ವರಶಂಕರರುಲಿದ ಹರಿನಾಮಸುಧಾಸಾರ ಜಗಸಕಲಕಾಧಾರ ನಾರಾಯಣ
|
ವಿವರಣೆ :
ಸಾಮಗಾನ ಪ್ರಿಯನಾದ ಓ ದೇವನೇ ! ಹಿರಣ್ಯ ಕಶಿಪುವಿನ ಪುತ್ರನಾದ ಪ್ರಹ್ಲಾದನನ್ನು ರಾಕ್ಷಸರಿಂದ ರಕ್ಷಿಸಿದವನೇ ಓ ನಾರಾಯಣನೇ
! ಆದಿ ಶಂಕರರು ರಚಿಸಿದ ಈ ಹರಿಯ ನಾಮದ ಅಮೃತ ಸಾರವು ಜಗತ್ತಿನ ಸಮಸ್ತರಿಗೂ ಶುಭವನ್ನುಂಟುಮಾಡಲಿ.
|
ಶ್ಲೋಕ - 17 - ಸಂಸ್ಕೃತದಲ್ಲಿ
:
ನಾರಾಯಣ ನಾರಾಯಣ ಜಯ ಗೋವಿಂದ ಹರೇ
ನಾರಾಯಣ ನಾರಾಯಣ ಜಯ ಗೋಪಾಲ ಹರೇ
|
ಕನ್ನಡದಲ್ಲಿ :
ನಾರಾಯಣ ನಾರಾಯಣ ಜಯ ಗೋವಿಂದ ಹರೇ
ನಾರಾಯಣ ನಾರಾಯಣ ಜಯ ಗೋಪಾಲ ಹರೇ
|
ವಿವರಣೆ :
ಎಲ್ಲರನ್ನೂ ರಕ್ಷಿಸುವ ಹೇ ದೇವಾ ! ಗೋವಿಂದ ! ನಾರಾಯಣ ! ಜಯವಾಗಲಿ
ಹೇ ಗೋಪಾಲ ! ಎಲ್ಲರನ್ನೂ ರಕ್ಷಿಸುವವ, ನಾರಾಯಣ ! ಜಯವಾಗಲಿ !
|
ಲೇಖನದ ಮೂಲಗಳು:
ಸಂಸ್ಕೃತ ಶ್ಲೋಕಗಳು : hindupedia.com
ಕನ್ನಡ ಶ್ಲೋಕಗಳು : ಶ್ರೀ.ಬಿ.ಎಸ್.ಚಂದ್ರಶೇಖರ
ಅವರ “ಸವಿಗನ್ನಡ ಸ್ತೋತ್ರಚಂದ್ರಿಕೆ”
|
No comments:
Post a Comment