ಶಾರದಾ ಭುಜಂಗ ಪ್ರಯಾತ ಸ್ತೋತ್ರ
(ಶಾರದಾಷ್ಟಕ)
|
ಪ್ರಸ್ತಾವನೆ : ಈ ಸ್ತೋತ್ರದಲ್ಲಿನ ಶಾರದ ದೇವಿಯು
ಶ್ರಿಂಗೇರಿ ಪಟ್ಟಣದಲ್ಲಿನ ಅಧಿದೈವತೆ. ಈಕೆಯು ದೇವಿ ಸರಸ್ವತಿಯ ಅವತಾರ. ಆದಿ ಶಂಕರಾಚಾರ್ಯರು
ಶ್ರಿಂಗೇರಿಯಲ್ಲಿ ಶಾರದಾ ಪೀಠವನ್ನು ಸ್ಥಾಪಿಸಿದ್ದಾರೆ. ಇದು ತುಂಗಾ ನದಿಯ ದಡದಲ್ಲಿರುವುದು.
ಆದಿ ಶಂಕರರ ಉಳಿದ ಸ್ತೋತ್ರಗಳಂತೆ ಈ ಸ್ತೋತ್ರವೂ ಸುಶ್ರಾವ್ಯವಾಗಿದೆಯಾದರೂ ಇದನ್ನು
ಅರಿತುಕೊಳ್ಳುವುದು ಅಷ್ಟು ಸುಲಭವಾದದ್ದಲ್ಲ.
|
ಶ್ಲೋಕ - 1 - ಸಂಸ್ಕೃತದಲ್ಲಿ :
ಸುವಕ್ಷೋಜಕುಂಭಾಂ ಸುಧಾಪೂರ್ಣಕುಂಭಾಂ
ಪ್ರಸಾದಾವಲಂಬಾಂ ಪ್ರಪುಣ್ಯಾವಲಂಬಾಮ್
ಸದಾಸ್ಯೇoದುಬಿಂಬಾo ಸದಾನೋಷ್ಠಬಿಂಬಾo
ಭಜೇ ಶಾರದಾಂಬಾಮಜಸ್ರo ಮದಂಬಾಮ್
|
ಕನ್ನಡದಲ್ಲಿ :
ಎದೆಯೊಳಕ್ಷಯ ಕಲಶ ಅಮೃತ ತುಂಬಿದ
ಕುಂಭ
ಮುದದಿ ವರಗಳನೀವ ಬಹುಪುಣ್ಯದಾಗರವು
ಚಂದಿರನ ವದನ ಅಧರದಿ ಮಂದಹಾಸ
ಸದಾ ಭಜಿಪೆ ನಮ್ಮಮ್ಮ ಶಾರದಾಂಬೆಯನು
|
ವಿವರಣೆ :
ಅಮೃತದಿಂದ ತುಂಬಿರುವ ವಕ್ಷವುಳ್ಳ, ತನ್ನ ಅನುಗ್ರಹವನ್ನು ಭಕ್ತರ ಮೇಲೆ ಹರಿಸಲು ಸದಾ ಸಿದ್ಧವಾಗಿರುವ ಹಾಗೂ
ಆಕೆಯು ಯಾರು ಸತ್ಕಾರ್ಯಗಳನ್ನು ಮಾಡುತ್ತಾರೋ ಅವರ ಯೋಗಕ್ಷೇಮವನ್ನು ನೋಡಿಕೊಳ್ಳುವಳು. ಸದಾ ಚಂದ್ರನಂತೆ ಹೊಳೆಯುವ ಆಕಾರವನ್ನು ಹೊಂದಿ ಆಕೆಯ ತುಟಿಗಳು ಕೆಂಪಾಗಿದ್ದು ಅದು ಕಡುಗೆಂಪಿನ
ಬಣ್ಣವನ್ನು ಹೋಲುತ್ತದೆ. ಆ ಶಾರದಾ ಮಾತೆಯನ್ನು ಸದಾ ನನ್ನ ಮಾತೆಯನ್ನಾಗಿ
ಭಕ್ತಿಯಿಂದ ಭಜಿಸುವೆ.
|
ಶ್ಲೋಕ - 2 - ಸಂಸ್ಕೃತದಲ್ಲಿ :
ಕಟಾಕ್ಷೇ ದಯಾರ್ದ್ರಾಂ ಕರೇ ಜ್ಞಾನಮುದ್ರಾಂ
ಕಲಾಭಿರ್ವಿನಿದ್ರಾಂ ಕಲಾಪೈಃ ಸುಭದ್ರಾಮ್
ಪುರಸ್ತ್ರೀಂ ವಿನಿದ್ರಾಂ ಪುರಸ್ತುಂಗಭದ್ರಾಂ
ಭಜೇ ಶಾರದಾಂಬಾಮಜಸ್ರo ಮದಂಬಾಮ್
|
ಕನ್ನಡದಲ್ಲಿ :
ಕಣ್ಣೋಟದಲಿ ಕರುಣೆ ಕರದಲ್ಲಿ ಚಿನ್ಮುದ್ರೆ
ಕಲೆಗಳಲೆ ಮುಳುಗಿ ಸಕಲಕನುಕೂಲೆ
ತ್ರಿಪುರ ವ್ಯಾಪಿಸಿ ತುಂಗಪುರದಿ
ನೆಲಸಿಹಳೆ
ಸದಾ ಭಜಿಪೆ ನಮ್ಮಮ್ಮ ಶಾರದಾಂಬೆಯನು
|
ವಿವರಣೆ :
ತನ್ನ ನೋಟದಲ್ಲಿ ತುಂಬಿತುಳುಕುತ್ತಿರುವ
ಕರುಣೆಯಿಂದ, ತನ್ನ ಕೈಗಳಲ್ಲಿ ಜ್ಞಾನದ ಸಂಕೇತವನ್ನು
ತೋರುತ್ತಾ, ಸದಾ ಎಚ್ಚರದಿಂದಿರುವ, ಮಹಾನ್ ದೇವತೆ
ಮತ್ತು ಪರಮ ಪವಿತ್ರವಾದ ತುಂಗಾ ನದಿಯ ದಡದಲ್ಲಿ ವಾಸಿಸುತ್ತಿರುವ ಮಾತೆ ಶಾರದೆಯನ್ನು ನನ್ನ ಮಾತೆಯಂತೆ
ಸದಾ ಭಜಿಸುವೆ.
|
ಶ್ಲೋಕ - 3 - ಸಂಸ್ಕೃತದಲ್ಲಿ :
ಲಲಾಮಾಂಕಫಾಲಾಂ ಲಸದ್ಗಾನಲೋಲಾo
ಸ್ವಭಕ್ತೈಕಪಾಲಾಂ ಯಶಃಶ್ರೀಕಪೋಲಾಮ್
ಕರೇತ್ವಕ್ಷಮಾಲಾಂ ಕನತ್ಪ್ರತ್ನಲೋಲಾಂ
ಭಜೇ ಶಾರದಾಂಬಾಮಜಸ್ರo ಮದಂಬಾಮ್
|
ಕನ್ನಡದಲ್ಲಿ :
ಫಾಲಚಂದ್ರಧಾರಿಣಿಯ ಗಾನ ಲೋಲೆಯನು
ಭಕ್ತರೇಕೈಕ ನೆಲೆ ಯಶಧನವನೀಯುವಳನು
ಅಕ್ಷಮಾಲೆಯು ಕರದಿ ಜಗ ನಡೆಸುವಳನು
ಸದಾ ಭಜಿಪೆ ನಮ್ಮಮ್ಮ ಶಾರದಾಂಬೆಯನು
|
ವಿವರಣೆ :
ತನ್ನ ಲಲಾಟದಲ್ಲಿ ಆಕರ್ಷಕ ಒಡವೆಗಳನ್ನು
ಧರಿಸಿರುವ, ಸುಮಧುರ ಗೀತೆಯಿಂದಾಗಿ ಭಾವಪರವಶಳಾದ,
ತನ್ನ ಭಕ್ತರ ಯೋಗಕ್ಷೇಮವನ್ನು ನೋಡಿಕೊಳ್ಳುವ, ಸೌಂದರ್ಯಕ್ಕೆ
ಹೆಸರಾದ ಎರಡು ಸುಂದರ ಕೆನ್ನೆಗಳಿಂದ ಶೋಭಿಸುವ, ಹಾಗೂ ಅಕ್ಷಮಾಲೆಯನ್ನು
ಕರದಲ್ಲಿ ಹಿಡಿದಿರುವ ಮತ್ತು ಒಡವೆಗಳಲ್ಲಿ ತೀವ್ರವಾದ ಇಷ್ಟವುಳ್ಳ , ಸದಾ
ನನ್ನ ಮಾತೆಯಾದ ಶಾರದೆಯನ್ನು ಭಜಿಸುತ್ತೇನೆ.
|
ಶ್ಲೋಕ - 4 - ಸಂಸ್ಕೃತದಲ್ಲಿ :
ಸುಸೀಮಂತವೇಣೀo ದೃಶಾ ನಿರ್ಜಿತೈಣೀo
ರಮತ್ಕೀರವಾಣೀo ನಮದ್ವಜ್ರಪಾಣಿಮ್
ಸುಧಾಮಂಥರಾಸ್ಯಾo ಮುದಾ ಚಿಂತ್ಯವೇಣೀo
ಭಜೇ ಶಾರದಾಂಬಾಮಜಸ್ರo ಮದಂಬಾಮ್
|
ಕನ್ನಡದಲ್ಲಿ :
ಹೆಣೆದ ಜಡೆ ಬೈತಲೆ ದಿಶೆಗಳ ಗೆಲುವ
ಚೆಲುವು
ರಂಜಿಸುವ ಗಿಳಿವಾತುಗಳಿಂದ್ರನ ಜಯಿಸೀತು
ಸಂತಸದಿ ಧ್ಯಾನಿಸಲು ಸುಧೆಯ ಹಿರಿಹೊನಲು
ಸದಾ ಭಜಿಪೆ ನಮ್ಮಮ್ಮ ಶಾರದಾಂಬೆಯನು
|
ವಿವರಣೆ :
ಸುಂದರವಾಗಿ ಕೂದಲನ್ನು ಹೆಣೆದಿರುವ
ಹಾಗೂ ಬೈತಲೆಯಲ್ಲಿ ತೂಗುತ್ತಿರುವ ಆಭರಣಗಳನ್ನು ಧರಿಸಿರುವ,
ಆಡುವ ಜಿಂಕೆಯ ನೋಟದಂತೆ, ಹಾಗೂ ದೇವೆಂದ್ರನಿಂದ ಪೂಜಿಸಲ್ಪಟ್ಟ,
ಜೇನಿನಂತೆ ಮುಗುಳ್ನಗುವನ್ನು ಸೂಸುತ್ತಿರುವ ವದನ, ಮತ್ತು
ನಮ್ಮ ಮನವನ್ನಾಕರ್ಷಿಸುವ ತಲೆಗೂದಲುಗಳುಳ್ಳ ಮಾತೆ ಶಾರದೆಯನ್ನು ಸದಾ ನನ್ನ ಮಾತೆಯನ್ನಾಗಿ ಭಜಿಸುವೆ.
|
ಶ್ಲೋಕ - 5 - ಸಂಸ್ಕೃತದಲ್ಲಿ :
ಸುಶಾಂತಾಂ ಸುದೇಹಾಂ ದೃಗಂತೇ ಕಚಾಂತಾo
ಲಸತ್ಸಲ್ಲತಾಂಗೀಮನಂತಾಮಚಿಂತ್ಯಾಮ್
ಸ್ಮೃತಾಂ ತಾಪಸೈಃ ಸರ್ಗಪೂರ್ವಸ್ಥಿತಾಂ
ತಾಂ
ಭಜೇ ಶಾರದಾಂಬಾಮಜಸ್ರo ಮದಂಬಾಮ್
|
ಕನ್ನಡದಲ್ಲಿ :
ಶಾಂತೆ ಸುರೂಪಿಣಿ ಕುಂತಲವು ದೃಷ್ಟಿ
ಕೊನೆವರೆಗೆ
ಬಳ್ಳಿಯೊಲು ಹೊಳೆವ ರೂಪು ಮತಿಗತೀತ
ಅನಂತ
ತವಸಿಗಳ ಧ್ಯೇಯ ಸೃಷ್ಟಿಪೂರ್ವಜೆಯೆ
ನಿನ್ನನು
ಸದಾ ಭಜಿಪೆ ನಮ್ಮಮ್ಮ ಶಾರದಾಂಬೆಯನು
|
ವಿವರಣೆ :
ಅಪೂರ್ವವಾದ ಶಾಂತಭಾವ, ಮುದ್ದಾದ ಮುಖಭಾವ, ಕಪ್ಪಾದ ಕೂದಲು,
ಜಿಂಕೆಯ ಕಣ್ಣು, ನವಿರಾದ ಆರೋಹಿಯಂತೆ ಹೊಳೆಯುವ ಶರೀರ,
ಮನಸ್ಸಿನಲ್ಲಿ ಕೂಡಾ ಅಳೆಯಲಾಗದ ಮಹಾನ್ ಋಷಿಮುನಿಗಳ ಕಲ್ಪನಾತ್ಮಕ ಪ್ರಪಂಚಕ್ಕೂ
ಮೊದಲೇ ಉಳ್ಳವಳಾದ, ಮಾತೆ ಶಾರದೆಯನ್ನು ಸದಾ ನನ್ನ ಮಾತೆಯಾಗಿ ಭಜಿಸುವೆ.
|
ಶ್ಲೋಕ - 6 - ಸಂಸ್ಕೃತದಲ್ಲಿ :
ಕುರಂಗೇ ತುರಂಗೇ ಮೃಗೇಂದ್ರೇ ಖಗೇಂದ್ರೇ
ಮರಾಲೇ ಮದೇಭೇ ಮಹೋಕ್ಷೇsಧಿರೂಢಾಮ್
ಮಹತ್ಯಾಂ ನವಮ್ಯಾಂ ಸದಾ ಸಾಮರೂಪಾo
ಭಜೇ ಶಾರದಾಂಬಾಮಜಸ್ರo ಮದಂಬಾಮ್
|
ಕನ್ನಡದಲ್ಲಿ :
ತುರಗ ಕುರಂಗ ಮೃಗೇಂದ್ರ ಖಗರಾಜ
ಅಂಚೆ ಮದಿಸಿದ ಗಜವು ಹೇರೆತ್ತು
ವಾಹನವು
ನವ ಮಹಾರೂಪಗಳ ಸೌಮ್ಯರೂಪಿಯನು
ಸದಾ ಭಜಿಪೆ ನಮ್ಮಮ್ಮ ಶಾರದಾಂಬೆಯನು
|
ವಿವರಣೆ :
ಜಿಂಕೆ, ಅಶ್ವ, ಸಿಂಹ, ಹದ್ದುಗಳ
ಮೇಲೆ ಸಂಚರಿಸುವವಳು, ಹಾಗೂ ಹಂಸ, ವೃಷಭ ಮತ್ತು
ಆನೆಗಳ ಮೇಲೆ ಕೂಡಾ ಸವಾರಿ ಮಾಡುವಳು, ಪವಿತ್ರ ನವರಾತ್ರೆಗಳಂದು ಶಾಂತ
ಸ್ವರೂಪವನ್ನುಳ್ಳ ಮಾತೆ ಶಾರದೆಯನ್ನು ಸದಾ ನನ್ನ ಮಾತೆಯನ್ನಾಗಿ ಭಕ್ತಿಯಿಂದ ಪೂಜಿಸುವೆ.
|
ಶ್ಲೋಕ - 7 - ಸಂಸ್ಕೃತದಲ್ಲಿ :
ಜ್ವಲತ್ಕಾಂತಿವಹ್ನಿಂ ಜಗನ್ಮೋಹನಾoಗೀo
ಭಜನ್ಮಾನಸಾಂಭೋಜಸುಭ್ರಾಂತಭೃoಗೀಮ್
ನಿಜಸ್ತೋತ್ರಸಂಗೀತನೃತ್ಯಪ್ರಭಾಂಗೀo
ಭಜೇ ಶಾರದಾಂಬಾಮಜಸ್ರo ಮದಂಬಾಮ್
|
ಕನ್ನಡದಲ್ಲಿ :
ಜ್ವಾಲೆಯಂತಿಹ ಕಾಂತಿ ಜಗಮೋಹಿಸುವ
ರೂಪ
ಲೀಲೆಯಿಂ ಭ್ರಮಿಸುತಿಹ ಚಿತ್ತಪದ್ಮದ
ದುಂಬಿ
ಗಾನ ನರ್ತನ ಸ್ತೋತ್ರಗಳಲಿ ಬೆಳಗುವ
ದೇವಿ
ಸದಾ ಭಜಿಪೆ ನಮ್ಮಮ್ಮ ಶಾರದಾಂಬೆಯನು
|
ವಿವರಣೆ :
ಕೆರಳಿದ ಬೆಂಕಿಯಂತಿರುವ ಅವಳ ಮುದ್ದಾದ
ಮುಖಭಾವವು, ಪ್ರಪಂಚವನ್ನಾಕರ್ಷಿಸುವ ಕಮಲ ಪುಷ್ಪದ
ಸುತ್ತಾ ತನ್ನ ಭಕ್ತರ ಮನಸ್ಸಿನಂತೆ ಹಾಗೂ ದುಂಬಿಯಂತೆ ಸುತ್ತಾಡುವ, ನೈಜ
ಪ್ರಾರ್ಥನೆ, ಗಾಯನ ಮತ್ತು ನೃತ್ಯಗಳಿಂದ ಅವಳ ತೇಜಸ್ಸು ವೃದ್ಧಿಯಾಗಿ ಪ್ರಕಾಶಿಸುವ,
ಮಾತೆ ಶಾರದೆಯನ್ನು ಸದಾ ನನ್ನ ಮಾತೆಯಂತೆ ಭಕ್ತಿಯಿಂದ ಪೂಜಿಸುವೆ.
|
ಶ್ಲೋಕ - 8 - ಸಂಸ್ಕೃತದಲ್ಲಿ :
ಭವಾಂಭೋಜನೇತ್ರಾಜಸಂಪೂಜ್ಯಮಾನಾo
ಲಸನ್ಮoದಹಾಸಪ್ರಭಾವಕ್ತ್ರಚಿಹ್ನಾಮ್
ಚಲಚ್ಚಂಚಲಾಚಾರುತಾಟಂಕಕರ್ಣಾಂ
ಭಜೇ ಶಾರದಾಂಬಾಮಜಸ್ರo ಮದಂಬಾಮ್
|
ಕನ್ನಡದಲ್ಲಿ :
ಅಜನೆ ಪೂಜಿಪ ನಿನ್ನ ಭವಕಮಲಮೊಗ್ಗಿನ
ಕಣ್ಣು
ಕಿರುಮಂದಹಾಸದಲಿ ಹೊಳೆವ ಮೊಗ ನಿನದು
ಮಿರುಗುವ ಕಿವಿಯೋಲೆಯೊಲೆದಾಡುವ
ಬೆರಗು
ಸದಾ ಭಜಿಪೆ ನಮ್ಮಮ್ಮ ಶಾರದಾಂಬೆಯನು
|
ವಿವರಣೆ :
ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಶಿವರಿಂದ ಪೂಜಿಸಲ್ಪಡುವಳು,
ಅವಳ ಹೊಳೆಯುವ ಮುಗುಳ್ನಗೆಯಿಂದ ಅವಳ ವದನವು ಬೆಳಗುವುದು, ಹಾಗೂ ಅವಳ ಕರ್ಣಾಭರಣದ ತೂಗಾಡುವಿಕೆಯಿಂದ ಸೌಂದರ್ಯವು ವೃದ್ಧಿಸುವುದು. ಅಂಥಹ ಮಾತೆ ಸರಸ್ವತಿಯನ್ನು ಸದಾ ನನ್ನ ಮಾತೆಯನ್ನಾಗಿ ಭಕ್ತಿಯಿಂದ ಪೂಜಿಸುವೆ.
|
ಲೇಖನದ ಮೂಲಗಳು:
ಸಂಸ್ಕೃತ ಶ್ಲೋಕ :celextel.org
ಕನ್ನಡ ಶ್ಲೋಕಗಳು : ಶ್ರೀ.ಬಿ.ಎಸ್.ಚಂದ್ರಶೇಖರ ಅವರ “ಸವಿಗನ್ನಡ
ಸ್ತೋತ್ರಚಂದ್ರಿಕೆ”
ವಿವರಣೆಗಳು : celextel.org – ಆಂಗ್ಲ
ಭಾಷೆಯಲ್ಲಿನ ವಿವರಣೆಗಳ ಭಾವಾರ್ಥವನ್ನು ಕನ್ನಡದಲ್ಲಿ ಪ್ರಸ್ತುತಿ ಪಡಿಸಿದವರು – ಗುರುಪ್ರಸಾದ್
ಹಾಲ್ಕುರಿಕೆ.
|
No comments:
Post a Comment